ನಾನು, ಅಕ್ಷತಾ. ಎಲ್ಲರಿಗೂ ತಮ್ಮ ಮನಸ್ಸಿನ ಮತು ಹೇಳುವಾಸೆ, ನನಗೆ ಇತರರ ಮನಸ್ಸಿನ ಮಾತನ್ನು ಅನುವಾದಿಸಿ ಹೇಳುವಾಸೆ, ಹಾಗಾಗಿಯೇ ಈ ಬ್ಲಾಗಿನ ಪ್ರಪಂಚ. ಮುಂಬಯಿಯ ವಾಸ ಮನಸ್ಸನ್ನು ಹೆಚ್ಚು ತೆರೆದಿದ್ದಲ್ಲದೆ, ಹಲವು ಜಾಣರ ಸಹವಾಸ ಸಾಹಿತ್ಯ ಕ್ಷೇತ್ರಕ್ಕಿಳಿಯುವಂತೆ ಮಾಡಿತು. ಅದರ ಮುಂದಿನ ಹಂತವೇ ಮುಂಬಯಿ ಕನ್ನಡ ಲೇಖಕಿಯರ ಬಳಗ ‘ಸೃಜನ’ಸೇರಿದ್ದು. ಅಲ್ಲಿಂದ ಮುಂದಿನ ಪ್ರವಾಸ ಬೊಂಬಾಟ್. ಮೊದಲನೆಯ ಅನುವಾದಿತ ಕೃತಿ ‘ಇಡ್ಲಿ ಆರ್ಕಿಡ್ ಮತ್ತು ಆತ್ಮಬಲ’ ಮೂಲ ಲೇಖಕರು ಶ್ರಿ.ವಿಠ್ಠಲ್.ವೆಂಕಟೇಶ್.ಕಾಮತ್. ಇನ್ನೆರಡು ಅನುವಾದಿತ ಕೃತಿಗಳು ಬಿಡುಗಡೆಯ ಹಾದಿಯಲ್ಲಿವೆ.